ಕಮಡೋಳಿ, ಅಮೀನ್ಸಾಹೇಬ : 1900-95. ಚಿತ್ರ  ಕಲಾವಿದ. ಇಂದಿನ ಗದಗ ಜಿಲ್ಲೆ ಲಕ್ಷ್ಮೀಶ್ವರದಲ್ಲಿ 1900ರಲ್ಲಿ ಜನಿಸಿದರು. ತಂದೆ ತಾಯಿಯನ್ನು ಕಳೆದುಕೊಂಡ ಬಳಿಕ ಕಲಾಭ್ಯಾಸಕ್ಕಾಗಿ ಮುಂಬೈಗೆ ತೆರಳಿದರು (1918). ಇದಕ್ಕೆ ಅಣ್ಣನ ಪ್ರೋತ್ಸಾಹವೂ ದೊರೆಯಿತು. ಮುಂಬೈಯಲ್ಲಿ ಜೆ.ಜೆ.ಕಲಾ ಶಾಲೆಯನ್ನು ಸೇರಿದರು. ಚಿತ್ರಕಲೆಯ ಅಭ್ಯಾಸ ನಡೆಸುತ್ತಿದ್ದಾಗ ಬಿsತ್ತಿರಚನಾ ಕಲೆಯನ್ನೂ ಅಧ್ಯಯನ ಮಾಡಿದರು. ಅಲ್ಲಿಯೇ ಫೆಲೋ ಆಗಿ ನೇಮಕಗೊಂಡರು; ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಇವರು ರಚಿಸಿದ ಸ್ಕೆಚ್ಇನ್ ಲಗಾರ್ಡನ್, ತಾಜ್ ಆಟ್ ಆಗ್ರಾ, ಜುಮ್ಮಾಮಸೀದಿ, ಬಾಂಬ್ ಪ್ರಮ್ ಮಲ್ಬಾರ್ ಹಿಲ್ಸ್‌ ಈ - ಕೃತಿಗಳು ಚಿತ್ರಕಲಾಪ್ರದರ್ಶನಗಳಲ್ಲಿ ಜನಮೆಚ್ಚಿಗೆ ಗಳಿಸಿದುವು. ಇವರ ಪ್ರೀತಿಯ ಕ್ಷೇತ್ರ ಜಲವರ್ಣ ಮಾಧ್ಯಮ. ತಮ್ಮ ಕುಂಚದ ಮೂಲಕ ಈ ಮಾಧ್ಯಮದಲ್ಲಿ ಅನೇಕ ಅಪುರ್ವ ನಿಸರ್ಗ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಹಳ್ಳಿಯ ಸಂತೆ, ಟಿಪ್ಪು ಸಮಾದಿs, ರಸ್ತೆ ಬದಿಯ ಸರ್ಕಸ್ ಮುಂತಾದ ತೈಲವರ್ಣದ ಕೃತಿಗಳು ಇವರ ಕಲಾ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಇವರು ರಚಿಸಿದ ರಾವಣ-ಜಟಾಯು ಕೃತಿ ರವಿವರ್ಮನ ಕೃತಿಗಿಂತ ಬಿsನ್ನವಾಗಿದೆ. ಇವರೊಬ್ಬ bsÁಯಾ ಚಿತ್ರಕಾರರೂ ಆಗಿದ್ದರು. ಧಾರವಾಡದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕಲೆಯನ್ನು ಕಲಿಸುತ್ತಿದ್ದರು. ಆ ಸಂದರ್ಭದಲ್ಲಿ ಮಾಡಲಿಂಗ್ ತರಬೇತಿಯನ್ನು ತೆಗೆದುಕೊಳ್ಳುತ್ತಿದ್ದರು. ಇವರ ಕೃತಿಗಳು ಮುಂಬಯಿಯ ಆರ್ಟ್ ಸೊಸೈಟಿ, ಆಲ್ ಇಂಡಿಯ ಫೈನ್ ಆರ್ಟ್ ಸೊಸೈಟಿ, ಸಿಮ್ಲಾ ಫೈನ್ ಆರ್ಟ್ ಸೊಸೈಟಿ ಹಾಗೂ ಮೈಸೂರು ದಸರಾ ಪ್ರದರ್ಶನಗಳಲ್ಲಿ ಪ್ರದರ್ಶನಗೊಂಡಿದ್ದವು. ಇವರು ಅನೇಕ ಗೌರವ-ಪುರಸ್ಕಾರಗಳಿಗೆ ಪಾತ್ರರಾಗಿದ್ದರು.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ